ಖಾಸಗಿ ಸಾರಿಗೆ ಸಂಘಟನೆಗಳ ಜೊತೆಗೆ ಜರುಗಿದ ಸಭೆ ವಿಫಲವಾಗಿದೆ.ಸುದೀರ್ಘ ಮೂರು ಗಂಟೆಗಳ ಕಾಲ ಸಭೆ ಜರುಗಿದ್ದು,ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆ ಜು 27ರಂದು ಸಾರಿಗೆ ಸಂಘಟನೆಗಳು ಕರೆದಿದ್ದ ಬೆಂಗಳೂರು ಬಂದ್ ಬಗ್ಗೆ ಸಚಿವರು ಮಾತಾಡಿಲ್ಲ.ಮತ್ತೆ ಸೋಮವಾರ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಭೆ ಕರೆದಿದ್ದಾರೆ.ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಸಂಘಟನೆಗಳ ಜೊತೆ ಪ್ರತ್ಯೇಕ ಸಭೆ ಕರೆದಿದ್ದು,ಮುಂದಿನ ಸೋಮವಾರ ತಲಾ ಎರಡು ಗಂಟೆಗಳ ಕಾಲ ಸಭೆ ನಡೆಯಲಿದೆ.