ಬಜೆಟ್ಗೂ ಮುನ್ನ ಸರ್ಕಾರಕ್ಕೆ ಬೇಡಿಕೆಗಳ ಸುರಿಮಳೆ ಶುರುವಾಗಿದ್ದು, ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮತ್ತೆ ಸಾರಿಗೆ ನೌಕರರು ರಸ್ತೆಗಿಳಿಯಲಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಇಲಾಖೆಯ 4 ನಿಗಮಗಳ ನೌಕರರಿಂದ ನಾಳೆ ಫ್ರೀಡಂಪಾರ್ಕ್ನಲ್ಲಿ ಕುಟುಂಬ ಸಮೇತ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದ್ದು, ಈ ಹೋರಾಟದಲ್ಲಿ ಸಾವಿರಾರು ನೌಕರರು ಭಾಗಿಯಾಗಲಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳೇನು ಅನ್ನುವುದನ್ನ ನೋಡುವುದಾದರೆ ದಿನಾಂಕ ಜ.1 2020ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೆ ವೇತನ