ಸಾಮಾನ್ಯವಾಗಿ ಟ್ರೆಕ್ಕಿಂಗ್ ಗೆ ಐದಾರು ಜನರೋ ಅಥವಾ ಎಂಟ್ಹತ್ತು ಜನರೋ ಹೋಗೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಬರೋಬ್ಬರಿ ನೂರಕ್ಕೂ ಹೆಚ್ಚು ಜನರು ಟ್ರೆಕ್ಕಿಂಗ್ ನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.ಗದಗ್ನಲ್ಲಿ ನಡೆದ ಟ್ರೆಕ್ಕಿಂಗ್ನಲ್ಲಿ ಬರೋಬ್ಬರಿ 100 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಟ್ರೆಕ್ಕಿಂಗ್ ಹವ್ಯಾಸವನ್ನು ಇನ್ನಷ್ಟು ಜನರು ರೂಢಿಸಿಕೊಳ್ಳಲು ಪ್ರೇರಣೆಯಾಗುತ್ತಿದ್ದಾರೆ. ಆಧುನಿಕ ಬದುಕಿನ ಒತ್ತಡದಲ್ಲಿ ಮನುಷ್ಯ ದೈಹಿಕ ಶ್ರಮವನ್ನು ಮರೆತಿದ್ದಾನೆ. ಇದರಿಂದಾಗಿ ದೇಹ ರೋಗದ ಗೂಡಾಗುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ