ದಾಯಾದಿಗಳ ಕಲಹ ತ್ರಿವಳಿ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ನಡೆದಿದೆ.ಕಲಬುರಗಿ ಜಿಲ್ಲೆಯ ಮೇದಕ್ ಗ್ರಾಮದ ಹೊಲವೊಂದರಲ್ಲಿ ಮೂರು ಜನರನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಮತ್ತೊಬ್ಬ ಮಗ ಸೇಡಂನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಮಲ್ಕಪ್ಪ ಚಿನ್ನಯ್ಯ(60), ಶಂಕ್ರಪ್ಪ (25), ಚಿನ್ನಪ್ಪ (27) ಕೊಲೆಯಾದವರು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಜಮೀನು ವಿವಾದ ಹಿನ್ನೆಲೆಯಲ್ಲಿ ನಡೆದ ದಾಯಾದಿಗಳ ಕಲಹವೇ ಈ ಕೊಲೆಗಳಿಗೆ ಕಾರಣ ಎನ್ನಲಾಗುತ್ತಿದೆ.ದಾಯಾದಿಗಳಾದ ಆಶಪ್ಪ ಚಿನ್ನಯ್ಯ,