ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯು ನಾಗರೀಕರಿಗೆ ಮತ್ತು ತೆರಿಗೆದಾರರಿಗೆ ಖಾತೆ ನೊಂದಾವಣೆ, ವಿಭಜನೆ, ಒಂದುಗೂಡಿಸುವಿಕೆ, ವರ್ಗಾವಣೆ ಸೇರಿದಂತೆ ಇನ್ನಿತ್ಯಾದಿ ಹಲವಾರು ಸೇವೆಗಳನ್ನು ನೀಡುತ್ತಿದೆ. ಈ ಸಂಬಂಧ ಪಾಲಿಕೆಯ ಅಧಿಕಾರಿಗಳು ಮತ್ತುನೌಕರರುಗಳು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಲ್ಲಿ ಸರಳೀಕರಣ ಮತ್ತು ಸುಧಾರಣೆಗಳನ್ನೊಳಗೊಂಡಂತೆ, ಎಲ್ಲಾ ವಲಯಗಳಲ್ಲಿಯೂ ಏಕರೂಪ ಪದ್ಧತಿಯನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು,