ಕಾರವಾರ : ಯಾರೂ ಟಿವಿ, ಪೇಪರ್ ನೋಡ್ತಾರೋ ಅವರ ತಲೆ ದಿನ ಹಾಳಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಅಂಕೋಲ ತಾಲೂಕಿನ ಅಲಗೆರೆಯಲ್ಲಿ ತಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಪತ್ರಿಕೆಯಲ್ಲಿ, ಟಿ.ವಿಯಲ್ಲಿ ನಮ್ಮ ಪರವಾಗಿ ಬರೆಯೋದಿಲ್ಲ. ಅವರು ಬೇಕಾದ್ದು ಬರೆದುಕೊಂಡು ಹೋಗಲಿ ನೀವ್ಯಾರೂ ತಲೆಕೆಡಿಸಿಕೊಳ್ಳಬೇಡಿ. ಕಳೆದ ಹತ್ತು ವರ್ಷದಿಂದ ನಾನು ಟಿ.ವಿ ನೋಡುತ್ತಿಲ್ಲ, ಪೇಪರ್ ಓದುತ್ತಿಲ್ಲ ಅದಕ್ಕೋಸ್ಕರ