ಬೆಂಗಳೂರು: ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಕೊಲೆ ಬೆದರಿಕೆ ಹಾಕಿದ್ದು ನಾನೇ ಎಂದು ಭೂಗತ ಪಾತಕಿ ರವಿ ಪೂಜಾರಿ ಒಪ್ಪಿಕೊಂಡಿದ್ದಾನೆ. ಇತ್ತೀಚೆಗೆ ಶಾಸಕ ಅನ್ಸಾರಿ ಕಾರ್ಯಕ್ರಮವೊಂದರಲ್ಲಿ ಕೆಲವರು ರಾಮನ ಹೆಸರಿನಲ್ಲಿ ಕೊಲೆ, ಸುಲಿಗೆ ಮಾಡ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಅವರಿಗೆ ಕೊಲೆ ಬೆದರಿಕೆ ಬಂದಿತ್ತು.ಇದರ ಬಗ್ಗೆ ಪ್ರತಿಕ್ರಿಯಿಸಿರುವ ಭೂಗತ ದೊರೆ ರವಿ ಪೂಜಾರಿ, ಗಂಗಾವತಿ ಶಾಸಕ ಒಬ್ಬ