ಬ್ಲೂಟಿಕ್ ಪಡೆಯಲು 8 ಡಾಲರ್ ಶುಲ್ಕ ವಿಧಿಸಿದ್ದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಸದ್ಯ ತನ್ನ ನಿರ್ಧಾರವನ್ನು ಅಮಾನತ್ತಿನಲ್ಲಿರಿಸಿದೆ. ನಕಲಿ ಖಾತೆಗಳ ಹಾವಳಿ ಮಿತಿಮೀರಿದ ಕಾರಣ ಚಂದಾದಾರಿಕೆ ಯೋಜನೆಯನ್ನು ಟ್ವಿಟರ್ ಅಮಾನತಿನಲ್ಲಿರಿಸಿದೆ. ಈಗಾಗಲೇ ಚಂದಾ ಮಾಡಿಕೊಂಡವರು ತಮ್ಮ ಖಾತೆಯ ದೃಢೀಕರಣ ಸೌಲಭ್ಯ ಹೊಂದಿರಲಿದ್ದಾರೆ. ಹೈಪ್ರೊಫೈಲ್ ಖಾತೆಗಳಿಗೆ ಅಧಿಕೃತ ಬ್ಯಾಜ್ ನೀಡುವ ವ್ಯವಸ್ಥೆಯನ್ನು ಕಂಪನಿ ಮರಳಿ ಜಾರಿಗೊಳಿಸಿದೆ. ಉದ್ದಿಮೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳ ಖಾತೆಯ ಕೆಳ ಭಾಗದಲ್ಲಿ ಬೂದುಬಣ್ಣದ ಬ್ಯಾಜ್