ಬೆಂಗಳೂರು : ಕೆಜಿಎಫ್ ಚಿತ್ರದ ಹಾಡನ್ನು ಬಳಸಿದ್ದಕ್ಕೆ ಕಾಂಗ್ರೆಸ್ ಟ್ವಿಟ್ಟರ್ಖಾತೆಯನ್ನು ಬ್ಲಾಕ್ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾ ವಾಣಿಜ್ಯ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.ಈ ಆದೇಶದಿಂದಾಗಿ ಕಾಂಗ್ರೆಸ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಕೆಜಿಎಫ್ ಹಾಡನ್ನು ಬಳಕೆ ಮಾಡಿದ್ದ ಟ್ವೀಟ್ಗಳನ್ನು ತೆಗೆದು ಹಾಕಬೇಕೆಂದು ಹೈಕೋರ್ಟ್ ಕಾಂಗ್ರೆಸ್ಗೆ ಆದೇಶ ನೀಡಿದೆ.ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ಹಾಡನ್ನು ಅನುಮತಿ ಇಲ್ಲದೇ ಕಾಂಗ್ರೆಸ್ ಬಳಸಿದೆ.ಕಾಂಗ್ರೆಸ್