ಬೆಂಗಳೂರು : ಹೊರರಾಜ್ಯದಿಂದ ಬಂದ ಹುಡುಗಿಯರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಂತರ ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಾಹೀರ್ ಅಹಮದ್ ಹಾಗೂ ಕೆ.ಪಿ. ರಘು ಬಂಧಿತ ಆರೋಪಿಗಳಾಗಿದ್ದು, ಇವರು ಮಡಿವಾಳದಲ್ಲಿ ಬಾಡಿಗೆ ಮನೆ ಪಡೆದುಕೊಂಡು ಹೊರರಾಜ್ಯದ ಯುವತಿಯರಿಗೆ ಕರೆ ಮಾಡಿ ಕೆಲಸ ನೀಡುವುದಾಗಿ ನಂಬಿಸಿ ನಗರಕ್ಕೆ ಕರೆ ತರುತ್ತಿದ್ದರು. ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡರೆ ಕೈತುಂಬಾ ಹಣ ಸಂಪಾದನೆ ಮಾಡಿಕೊಳ್ಳಬಹುದೆಂದು ಆಮಿಷ ಒಡ್ಡಿ ವೇಶ್ಯಾವಾಟಿಕೆ