ಗದಗದಲ್ಲಿ ರೀಬೋರಿಂಗ್ ವೇಳೆ ಮಣ್ಣು ಕುಸಿದು ಕೊಳವೆ ಬಾವಿಗೆ ಬಿದ್ದಿದ್ದ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮಣ್ಣಿನಡಿ ಸಿಲುಕಿದ್ದ ಜಮೀನು ಮಾಲೀಕ ಶಂಕರಪ್ಪ(30) ಮತ್ತು ಮೇಸ್ತ್ರೀ ಬಸವರಾಜು(33) ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸುಮಾರು 3 ಗಂಟೆಗಳ ಕಾರ್ಯಾಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ರೋಣ ತಹಸೀಲ್ದಾರ್ ಶಿವಲಿಂಗ ಪ್ರಭು ವಾಲಿ ಖಚಿತಪಡಿಸಿದ್ದಾರೆ. ಜಮೀನಿನಲ್ಲಿ ಬತ್ತಿಹೋಗಿದ್ದ ಕೊಳವೆ ಬಾವಿಯ ರೀಬೋರಿಂಗ್ ವೇಳೆ ಬೆಳಗ್ಗೆ ಈ ಅವಘಡ ಸಂಭವಿಸಿತ್ತು. ಮಣ್ಣಿನಡಿ ಸಿಲುಕಿದ್ದರಿಂದ ಉಸಿರಾಟಕ್ಕೆ ಆಸ್ಪದವೇ