ಕೊರೋನಾ ಸೋಂಕಿನಿಂದ ಕಳೆದ ಏಪ್ರಿಲ್ 7 ರಂದು ಮೃತಪಟ್ಟಿದ್ದ ಕಲಬುರಗಿಯ 65 ವರ್ಷದ ವ್ಯಕ್ತಿಯ ನೇರ ಸಂಪರ್ಕದಲ್ಲಿ ಬಂದಿರುವ ಇಬ್ಬರಲ್ಲಿ ಕೋವಿಡ್ – 19 ಪತ್ತೆಯಾಗಿದೆ. ಮೃತನ 24 ವರ್ಷದ ಸೊಸೆಗೆ ಮತ್ತು ಸದರಿ ವ್ಯಕ್ತಿಗೆ ಚಿಕಿತ್ಸೆ ನೀಡಿದ ಬಹಮನಿ ಅಸ್ಪತ್ರೆಯಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಲಬುರಗಿ ನಗರದ ಅದರ್ಶ ನಗರದ 38 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಎಂದು ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.