ಶಾಲೆಯಿಂದ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರಿಬ್ಬರನ್ನು ಕರೆದು ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಕಾಮುಕ ಅರೆಸ್ಟ್ ಆಗಿದ್ದಾನೆ. ಅರುಣಕುಮಾರ ಠಾಕೂರ (52) ಬಂಧಿತ ಕಾಮುಕನಾಗಿದ್ದಾನೆ. ಅಂಗಡಿ ಮಾಲೀಕನಾಗಿದ್ದ ಈತ ಇಬ್ಬರು ಹುಡುಗಿಯರನ್ನು ಕರೆದು ಅತ್ಯಾಚಾರ ಮಾಡಿದ್ದನು. ಆ ಬಳಿಕ ವಿದ್ಯಾರ್ಥಿನಿಯರು ಪೋಷಕರಿಗೆ ವಿಷಯ ತಿಳಿಸಿದ್ದರು. ಅತ್ಯಾಚಾರ ಮಾಡಿ ತಲೆ ಮರೆಸಿಕೊಂಡಿದ್ದ ಕಾಮುಕ ಅರುಣಕುಮಾರ ಸ್ವಾಮೀಜಿ ಥರ ವೇಷ ಬದಲಿಸಿಕೊಂಡು ತಿರುಗುತ್ತಿದ್ದನು. ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಬಂಧನ