ಮಹಿಳೆಯೊಬ್ಬಳಿಗೆ ಹುಟ್ಟಿದ ಮಗುವಿಗೆ ಎರಡು ತಲೆ, ಮೂರು ಕೈಗಳು ಇರೋದು ವೈದ್ಯಕೀಯ ರಂಗದಲ್ಲಿ ಅಚ್ಚರಿಗೆ ಕಾರಣವಾಗಿದೆ. 21 ವರ್ಷದ ಮಹಿಳೆ ಮದ್ಯಪ್ರದೇಶದ ವಿದಿಶಾ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಈ ವಿಚಿತ್ರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋನೋಗ್ರಾಫಿ ಮಾಡಿದ್ದಾಗ ಮಹಿಳೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳಿವೆ ಎಂಬುದಾಗಿ ತಿಳಿದು ಬಂದಿತ್ತು.ಆದರೆ ಆಪರೇಷನ್ ಮಾಡಿ ಎರಡು ತಲೆ, ಮೂರು ಕೈಗಳು ಇರೋ ಮಗುವನ್ನು ಹೊರತೆಗೆಯಲಾಗಿದೆ. ವಿಚಿತ್ರ ಮಗು ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ.