ರಾಜ್ಯದ ಇಬ್ಬರು ಶಾಸಕರು ಹಾಗೂ ಪ್ರಭಾವಿ ಸಚಿವರ ರಾಸಲೀಲೆ ಸಿಡಿ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆ ಸಿಡಿಗಳನ್ನು ಶ್ರೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಧಾರವಾಡದ ಕಲಾಕ್ಷೇತ್ರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವೈ.ಮೇಟಿ ಅಷ್ಟೇ ಇಲ್ಲ ಅಂತಹ ಸಾಕಷ್ಟು ಜನ ಪ್ರತಿನಿಧಿಗಳು ದೃಷ್ಕೃತ್ಯದಲ್ಲಿ ತೊಡಗಿರುವ ಮಾಹಿತಿ ನನ್ನ