ಜಿಲ್ಲೆಯಲ್ಲಿರುವ ಇಬ್ಬರು ಜೆಡಿಎಸ್ ಶಾಸಕರು ಜೆಡಿಎಸ್ ಪಕ್ಷವನ್ನು ತೊರೆಯುವುದು ಖಚಿತವಾಗಿದ್ದು, ಅವರ ಬದಲು ಪರ್ಯಾಯ ಅಭ್ಯರ್ಥಿಗಳನ್ನು ಸಿದ್ಧಗೊಳಿಸಲು ಜೆಡಿಎಸ್ ಚಾಲನೆ ನೀಡಿದೆ. ರಾಯಚೂರು ನಗರದ ಡಾ.ಶಿವರಾಜ ಪಾಟೀಲ ಹಾಗೂ ಲಿಂಗಸೂಗೂರು ಕ್ಷೇತ್ರದ ಮಾನಪ್ಪ ವಜ್ಜಲ ಅವರು ಬಿಜೆಪಿ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಆದರೆ ಇನ್ನೂ ಟಿಕೆಟ್ ಅಂತಿಮಗೊಂಡಿಲ್ಲ. ಜೆಡಿಎಸ್ನ ಇಬ್ಬರೂ ಶಾಸಕರು ಕಳೆದ ಕೆಲ ತಿಂಗಳುಗಳಿಂದ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದು, ಈ