ಅಂತರ್ಜಾಲದಲ್ಲಿ ಫೋಟೊ ಪೋಸ್ಟ್ ಮಾಡಿ ಗಿರಾಕಿಗಳನ್ನು ಫ್ಲ್ಯಾಟ್ ಗೆ ಆಹ್ವಾನಿಸುತ್ತಿದ್ದವರಿಗೆ ಕೊನೆಗೆ ಆಗಿದ್ದೇನು?

ಬೆಂಗಳೂರು| pavithra| Last Updated: ಶನಿವಾರ, 12 ಡಿಸೆಂಬರ್ 2020 (11:50 IST)
ಬೆಂಗಳೂರು : ಪೂರ್ವ ಬೆಂಗಳೂರಿನ ರಾಮಮೂರ್ತಿ ನಗರದ ವಸತಿ ಕಟ್ಟಡವೊಂದರ ಉಗಾಂಡದ ಮಹಿಳೆಯರಿಬ್ಬರು ಸೆಕ್ಸ್ ದಂಧೆ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಸಿಸಿಬಿ ಬಲೆಗೆ ಬಿದ್ದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಮಹಿಳೆಯರು ಈ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದರು . ಆ ಮೂಲಕ ಆಸಕ್ತರನ್ನು ಫ್ಲ್ಯಾಟ್ ಗೆ ಆಹ್ವಾನಿಸುತ್ತಿದ್ದರು.  ಈ ಬಗ್ಗೆ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಲ್ಲಿದ್ದ ಮಹಿಳೆಯರನ್ನು ರಕ್ಷಿಸಿ ಆಶ್ರಯಕ್ಕೆ ಕಳುಹಿಸಿದ್ದಾರೆ. ಮತ್ತು ಅಲ್ಲಿದ್ದ ದಾಖಲೆಗಳನ್ನು ಪರಿಶೀಲಿಸುವುದರ ಮೂಲಕ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :