ವಾಯುವಿಹಾರಕ್ಕೆ ಹೊರಟಿದ್ದ ಇಬ್ಬರು ಮಹಿಳೆಯರು ಕೊಲೆಗೀಡಾದ ಘಟನೆ ನಡೆದಿದೆ. ವಾಯುವಿಹಾರಕ್ಕೆ ಹೊರಟಿದ್ದ ಇಬ್ಬರು ಮಹಿಳೆಯರನ್ನು ಮಾನಸಿಕ ಅಸ್ವಸ್ಥನೊಬ್ಬ ಕಟ್ಟಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ ನಗರದ ಜನವಾಡಾ ರಸ್ತೆಯ ಲೇಬರ್ ಕಾಲೋನಿಯಲ್ಲಿ ಇಂದು ಮುಂಜಾನೆ ನಡೆದಿದೆ. ಲೇಬರ್ ಕಾಲೋನಿಯ ಲಲಿತಮ್ಮ (45) ಮತ್ತು ಅವರ ನಾದಿನಿ ದುರ್ಗಮ್ಮ (50) ಕೊಲೆಯಾದ ಮಹಿಳೆಯರು.ಬೆಳಿಗ್ಗೆ ಎಂದಿನಂತೆ ಲಲಿತಮ್ಮ ಮತ್ತು ದುರ್ಗಮ್ಮ ಅವರು ಕಾಲೋನಿಯಲ್ಲಿ ವಾಯುವಿಹಾರಕ್ಕೆ ಹೊರಟಿದ್ದಾಗ ಕಾಲೋನಿಯಲ್ಲಿರುವ ಹನುಮಾನ