ಬೆಂಗಳೂರು: ತಡರಾತ್ರಿ ಮದ್ಯಸೇವಿಸಿ ವಾಹನ ಚಲಾವಣೆ ಮಾಡುವವರಿಗೆ ಟ್ರಾಫಿಕ್ ಪೊಲೀಸರು ಡ್ರಿಂಕ್ ಆಂಡ್ ಡ್ರೈವ್ ಟೆಸ್ಟ್ ಮಾಡೋದು ಸಾಮಾನ್ಯ. ಆದರೆ ಇಲ್ಲಿ ಕುಡುಕರಿಬ್ಬರು ಪೊಲೀಸರಿಗೆ ಪರೀಕ್ಷೆ ಮಾಡಲು ಹೋಗಿದ್ದಾರೆ.ಬೆಂಗಳೂರಿನಲ್ಲಿ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಈ ವೇಳೆ ಕುಡಿದು ಬೈಕ್ ಚಲಾಯಿಸುತ್ತಿದ್ದ ಇಬ್ಬರನ್ನು ಡ್ರಿಂಕ್ ಆಂಡ್ ಡ್ರೈವ್ ಟೆಸ್ಟ್ ಮಾಡಿಸಲಾಗಿದೆ.ಈ ವೇಳೆ ಇಬ್ಬರೂ ಕಂಠಪೂರ್ತಿ ಮದ್ಯಸೇವಿಸಿದ್ದು ಖಚಿತವಾಗಿದೆ. ಆದರೆ ಪೊಲೀಸರು