ಉಬರ್ ಟ್ಯಾಕ್ಸಿ ಚಾಲಕನೊಬ್ಬ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆಸಿ ಇಂಜಿನಿಯರ್ ಒಬ್ಬನ ಮೂಗಿಗೆ ರಕ್ತ ಬರುವಂತೆ ಗುದ್ದಿದ ಘಟನೆ ನಡೆದಿದೆ. ಅನೀಕ್ ರಾಯ್ (23) ಗಾಯಗೊಂಡ ಟೆಕ್ಕಿಯಾಗಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಉಬರ್ ಚಾಲಕನ ದಾಳಿಯಿಂದ ಟೆಕ್ಕಿಯ ಮೂಗಿನ ಬೋನ್ ಗೆ ತೀವ್ರ ಪೆಟ್ಟಾಗಿದೆ. ಚಾಲಕನ ವಿರುದ್ಧ ಟೆಕ್ಕಿ ದೂರು ನೀಡಿದ್ದಾರೆ.