ಮುಂಬರುವ ಯುಗಾದಿಗೆ ಸರ್ಕಾರ ಇರುತ್ತೋ ಬಿಡುತ್ತೋ ಗೊತ್ತಿಲ್ಲ- ಡಿ.ಕೆ. ಸುರೇಶ್ ರಿಂದ ಗೊಂದಲದ ಹೇಳಿಕೆ

ಬೆಂಗಳೂರು| pavithra| Last Modified ಶನಿವಾರ, 19 ಜನವರಿ 2019 (13:16 IST)
ಬೆಂಗಳೂರು : 5 ವರ್ಷ ನಮ್ಮ ಆಡಳಿತ ನಡೆಸುತ್ತೆ ಎಂದು ದೋಸ್ತಿ ಸರ್ಕಾರದ ನಾಯಕರು ವಿಶ್ವಾಸ ವ್ಯಕ್ತಪಡಿಸಿದರೆ , ಸಂಸದ ಡಿ.ಕೆ. ಸುರೇಶ್
ಮಾತ್ರ
ಮುಂಬರುವ ಯುಗಾದಿಗೆ ಸರ್ಕಾರ ಇರುತ್ತೋ ಬಿಡುತ್ತೋ ಗೊತ್ತಿಲ್ಲ. ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ.


ಬನ್ನೇರುಘಟ್ಟದ ಸಮೀಪದ ಮಂಟಪ ಗ್ರಾಮ ಪಂಚಾಯತ್ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸಂಸದ ಹಾಗೂ ಬಿಜೆಪಿಯ ಆನೇಕರು ಹೇಳುತ್ತಿದ್ದರು ಹೊಸ ವರ್ಷಕ್ಕೆ ಸರ್ಕಾರ ಬೀಳುತ್ತೆ, ಸಂಕ್ರಾಂತಿಗೆ ಬೀಳುತ್ತೆ ಎಂದು. ನೋಡೋಣ ಮುಂಬರುವ ಯುಗಾದಿಗೆ ಸರ್ಕಾರ ಇರುತ್ತೋ ಬಿಡುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈಗ ಸರ್ಕಾರ ಸುಭದ್ರವಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ತಯಾರಾಗಿ’ ಎಂದು ತಿಳಿಸಿದ್ದಾರೆ.


ಹಾಗೇ ‘ಮುಂದಿನ ಲೋಕಸಭೆ ಚುನಾವಣೆಗೆ ಆರ್. ಅಶೋಕ್ ಗೆ ಏಕೆ ಕಾಯೋದು. ನರೇಂದ್ರ ಮೋದಿಯವರನ್ನೇ ಮೀಟ್ ಮಾಡುತ್ತೇನೆ, ಅವರೇ ಎದುರಾಳಿ ಅಭ್ಯರ್ಥಿಯಾದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :