ಉಕ್ರೇನ್ ಮತ್ತು ರಷ್ಯಾ ನಡುವಣ ಯುದ್ಧ ಒಂದು ವರ್ಷ ಸಮೀಪಿಸುತ್ತಿದೆ. ಇದು ಅಪಾರ ಪ್ರಮಾಣದ ಪ್ರಾಣ, ಆಸ್ತಿ ಹಾನಿ ಉಂಟು ಮಾಡಿದೆ. ಹೊಸ ವರ್ಷಾಚರಣೆಯ ಮಧ್ಯೆಯೂ ಉಕ್ರೇನ್ ನಡೆಸಿದ ಬಾಂಬ್ ದಾಳಿಯಲ್ಲಿ ರಷ್ಯಾದ 63 ಸೈನಿಕರು ಸಾವನ್ನಪ್ಪಿದ್ದಾರೆ. 63 ಅಲ್ಲ 100ಕ್ಕೂ ಅಧಿಕ ಸೈನಿಕರು ಹತರಾಗಿದ್ದಾರೆಂದು ಉಕ್ರೇನ್ ಹೇಳಿಕೊಂಡಿದೆ. ಡೊನೆಟ್ಸ್ಕ್ನ ಮಕಿವ್ಕಾ ಪ್ರದೇಶದಲ್ಲಿ ರಷ್ಯಾದ ಸಶಸ್ತ್ರ ಪಡೆಗಳ ಒಂದು ಘಟಕವನ್ನು ಉಕ್ರೇನಿಯನ್ ಪಡೆಗಳು ಅಮೆರಿಕ ನಿರ್ಮಿತ ಹಿಮಾರ್ಸ್ನ 6 ರಾಕೆಟ್ಗಳಿಂದ