ಉಮೇಶ್ ಜಾಧವ್ 50 ಕೋಟಿಗೆ ಡೀಲ್?: ಬಿಜೆಪಿ ಸಂಸದೆ ಬಾಯ್ಬಿಟ್ಟರು ಸ್ಫೋಟಕ ಸತ್ಯ!

ಹುಬ್ಬಳ್ಳಿ, ಬುಧವಾರ, 15 ಮೇ 2019 (15:32 IST)

ರಾಜ್ಯದಲ್ಲಿ ಕಾಂಗ್ರೆಸ್ ನವರ ಕೊಡುಗೆ ಶೂನ್ಯವಾಗಿದೆ.  ಕಾಂಗ್ರೆಸ್ ನವರಿಗೆ ಮತಕೇಳುವ ಯಾವುದೇ ನೈತಿಕತೆ ಇಲ್ಲ.
 ಮೈತ್ರಿ ಸರ್ಕಾರ ಬೀಳುತ್ತೆ ಅಂತಾ ನಾವು ಹೇಳಿಲ್ಲ, ನಿಮ್ಮ ಶಾಸಕರೇ ಹೇಳುತ್ತಿದ್ದಾರೆ. ಹೀಗಂತ ಬಿಜೆಪಿ ಸಂಸದೆ ದೂರಿದ್ದಾರೆ.

ಹುಬ್ಬಳ್ಳಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಉಮೇಶ ಜಾಧವ್ 50 ಕೋಟಿಗೆ ಡೀಲ್ ಆಗಿದ್ದಾರೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು,  ಉಮೇಶ ಜಾಧವ್ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದವರು.  ಅವರಿಗೆ ದುಡ್ಡಿನ ಆಮೀಷಕ್ಕೆ ಒಳಗಾಗುವ ದರಿದ್ರ ಬಂದಿಲ್ಲ.  ಮೈತ್ರಿ ಸರ್ಕಾರದ ಒಳಜಗಳದಿಂದಾಗಿ ಅವರು ಬಿಜೆಪಿಗೆ ಬಂದಿದ್ದಾರೆ ಎಂದರು.

 
ಡಿಕೆಶಿ ಅವರು ಇಲ್ಲಿಗೆ ಬಂದು ನಮ್ಮ ಪಕ್ಷದ ಕಾರ್ಯಕರ್ತರನ್ನ ಖರೀದಿ ಮಾಡಲು ನಿಂತಿದ್ದಾರೆ. ಅವರು ಖರೀದಿ ಮಾಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ.  ಆದ್ರೆ ಅವರ ದುಡ್ಡಿಗೆ ಇಲ್ಲಿ ಯಾರೂ ಖರೀದಿಗೆ ಸಿದ್ಧರಿಲ್ಲ ಎಂದ್ರು.

 ಮೈತ್ರಿ ಸರ್ಕಾರದ ಶಾಸಕರು ಯಾವಾಗ ರಾಜೀನಾಮೆ ಕೊಡುತ್ತಾರೆ ಆವಾಗ ಅವರನ್ನ ಮಾತನಾಡಿಸುತ್ತೇವೆ.  ನಾವು ಮೈತ್ರಿ ಸರ್ಕಾರವನ್ನ ಬೀಳಿಸುತ್ತೇವೆ ಅಂತಾ ಎಲ್ಲಿಯೂ ಹೇಳಿಲ್ಲ.  ಅವರವರೇ  ಕಚ್ಚಾಡಿಕೊಳ್ಳುತ್ತಿದ್ದಾರೆ ಹೀಗಾಗಿ ಅವರ ಕಚ್ಚಾಟದಿಂದಲೇ ಸರ್ಕಾರ ಬೀಳುತ್ತೆ ಎಂದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌: ಬೆಂಗಳೂರು ರೈನೋಸ್‌ ಶುಭಾರಂಭ

ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಇಲ್ಲಿನ ಬಾಲೆವಾಡಿ ಶ್ರೀ ಶಿವಛತ್ರಪತಿ ...

news

ಸರಕಾರ ನಡೆಸಲು ಬಿಜೆಪಿ ಬಿಡ್ತಿಲ್ಲ ಎಂದ ಕಾಂಗ್ರೆಸ್

ರಾಜ್ಯದಲ್ಲಿ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರುವ ಪಕ್ಷಗಳ ಸರಕಾರ ಅಸ್ತಿತ್ವದಲ್ಲಿದೆ. ಆದರೆ ಬಿಜೆಪಿ ...

news

ಯಡಿಯೂರಪ್ಪ ಮನೆ ಮುಂದೆ ವಾಚಮನ್ ಆಗ್ತೀನಿ ಎಂದ ಜಮೀರ್

ಮೇ 23 ರ ಲೋಕ ಫಲಿತಾಂಶ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಿದರೆ ನಾನು ಯಡಿಯೂರಪ್ಪರ ಮನೆ ಮುಂದೆ ...

news

ಸಿದ್ದರಾಮಯ್ಯ ಚೇಲಾಗಳು ಸೋಬಾನೆ ಪದ ಹಾಡುತ್ತಿದ್ದಾರಂತೆ…

ಮತ್ತೊಮ್ಮೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಾಗಿ ಅವರ ಚೇಲಾಗಳು ಸೋ… ಅಂತ ಸೋಬಾನೆ ಪದ ...