ಬಂಡಾಯಗಾರರೊಂದಿಗೆ ನಾನಿಲ್ಲ ಎಂದ ಉಮೇಶ್ ಜಾಧವ

ಕಲಬುರಗಿ, ಬುಧವಾರ, 13 ಫೆಬ್ರವರಿ 2019 (12:03 IST)

ಕಾಂಗ್ರೆಸ್ ನ ಬಂಡಾಯಗಾರರೊಂದಿಗೆ ನಾನು ಇಲ್ಲ. ಅಲ್ಲದೇ ನಾನು ಮುಂಬೈಗೂ ಹೋಗಿಲ್ಲ. ಹೀಗಂತ ಕೈ ಪಾಳೆಯದ ಯು ಟರ್ನ್​ ಹೊಡೆದಿದ್ದಾರೆ.

ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ನೀಡುವ ಕುರಿತು ನಿರ್ಣಯ ಕೈಗೊಂಡಿಲ್ಲ. ಜನರ ಅಭಿಪ್ರಾಯ ಪಡೆದು ಮುಂದುವರೆಯುತ್ತೇನೆ ಎಂದಿದ್ದಾರೆ.

ನನಗೆ ಯಾರ ಜೊತೆಗೆ ಯಾವ ಸಮಸ್ಯೆಯೂ ಆಗಿಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿದ್ರೆ ಶಿಕ್ಷೆಗೆ ಒಳಪಡಲು ಸಿದ್ಧ. ಸ್ಥಳೀಯವಾಗಿ ಒಂದಷ್ಟು ಸಮಸ್ಯೆಗಳಿವೆ. ಸಿದ್ದರಾಮಯ್ಯ ನಮ್ಮ ನಾಯಕರು ಎಂದ ಅವರು, ಬಿಜೆಪಿ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ತಮಗೆ ಸ್ನೇಹಿತರಿದ್ದಾರೆ ಎಂದಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ. ಎಲ್ಲೂ ಹೋಗಿಲ್ಲ. ವಿಪ್ ಕೊಟ್ಟಿದ್ದಾರೆ.

ಅದಕ್ಕೆ ಹಾಜರಾಗಿದ್ದೇನೆ. ಈ ಹಿಂದೆ ಗೈರು ಹಾಜರಾಗಿದ್ದಕ್ಕೆ ಸ್ಪೀಕರ್ ಗೆ ಮಾಹಿತಿ ನೀಡಿದ್ದೇನೆ. ಹೀಗಂತ ಕಲಬುರಗಿ ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಹೇಳಿಕೊಂಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ಪರಿಸ್ಥಿತಿಗೆ ಹೋಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡ್ರಾ ಸ್ಪೀಕರ್?

ಬೆಂಗಳೂರು : ನಿನ್ನೆ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಪರಿಸ್ಥಿತಿಯನ್ನು ರೇಪ್‍ಗೆ ಒಳಗಾದವರ ...

news

ಕುಮಾರಸ್ವಾಮಿ ಹಾಗೂ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ

ಬೆಂಗಳೂರು : ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ಹಾಸನದ ಬಿಜೆಪಿ ಶಾಸಕ ...

news

ಅಪರೇಷನ್ ಕಮಲದ ಆಡಿಯೋದ ಸಂಪೂರ್ಣ ಮಾಹಿತಿ ಬಹಿರಂಗ; ಶರಣಗೌಡ ಮುಂದೆ ಆಪರೇಷನ್ ಪ್ಲಾನ್ ಬಿಚ್ಚಿಟ್ಟಿ ಶಾಸಕ ಶಿವನಗೌಡ ನಾಯಕ್

ಬೆಂಗಳೂರು : ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಅಪರೇಷನ್ ಕಮಲದ ಆಡಿಯೋದ ...

news

ಅಪರೇಷನ್ ಕಮಲ ಫೇಲ್; ಕೊನೆಗೂ ಬೆಂಗಳೂರಿಗೆ ಬಂದ ಅತೃಪ್ತರು

ಬೆಂಗಳೂರು : ಮುಂಬೈ ನಲ್ಲಿದ್ದ ನಾಲ್ವರು ಅತೃಪ್ತ ಶಾಸಕರು ಕೊನೆಗೂ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬುದಾಗಿ ...