ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ- ಉಮೇಶ್ ಜಾಧವ್ ಎಚ್ಚರಿಕೆ

ಕಲಬುರಗಿ, ಮಂಗಳವಾರ, 30 ಏಪ್ರಿಲ್ 2019 (10:39 IST)

ಕಲಬುರಗಿ : ಪ್ರಜಾಪ್ರಭುತ್ವ ಅಂದ್ರೆ ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಇದೀಗ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಉಮೇಶ್ ಜಾಧವ್, ಗವರ್ನಮೆಂಟ್ ಆಫ್ ಮಲ್ಲಿಕಾರ್ಜುನ ಖರ್ಗೆ, ಫಾರ್ ಪ್ರಿಯಾಂಕ್ ಖರ್ಗೆ, ಫಾರ್ ದಿ ಪಿಪಲ್ ಆಫ್ ಪ್ರಿಯಾಂಕ್ ಖರ್ಗೆ, ಇದು ಮಲ್ಲಿಕಾರ್ಜುನ ಖರ್ಗೆಯವರ ಪ್ರಿನ್ಸಿಪಲ್ ಎಂದು ಹೇಳಿದ್ದಾರೆ.


ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಬಿಟ್ಟು ದೇವರಾಜ ಅರಸು ಜೊತೆ ಹೋಗಿ ಮತ್ತೆ ಪಕ್ಷಕ್ಕೆ ಮರಳಿದ್ರು, ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ರು, ಇವರೆಲ್ಲ ದುಡ್ಡು ತೆಗೆದುಕೊಂಡು ಪಕ್ಷ ಬಿಟ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಮೇಲೆ ಆರೋಪ ಮಾಡಲು ಯಾವುದೇ ವಿಷಯವಿಲ್ಲ. ಹೀಗಾಗಿ ಪದೇ ಪದೆ ಮಾರಾಟವಾಗಿದ್ದೀರಾ ಎಂದು ಹೇಳ್ತಾರೆ ಅವರು ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ, ದುಡ್ಡು ಪಡೆದದ್ದು ಪ್ರೂವ್ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವೆ.  ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೂಜ್ಯರು ಜನಿಸಿದ ನಾಡಿನ ಮಣ್ಣನಿಂದ ಮಾಡಿದ ರಸಗುಲ್ಲಾವನ್ನು ಪ್ರಸಾದದಂತೆ ಸ್ವೀಕರಿಸುತ್ತೇನೆ-ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ಮೋದಿಗೆ ಮಣ್ಣಿನಿಂದ ಮಾಡಿದ ರಸಗುಲ್ಲಾ ನೀಡುತ್ತೇನೆ ಎಂದ ಮಮತಾ ಬ್ಯಾನರ್ಜಿಗೆ ಪ್ರಧಾನಿ ...

news

ಸರಣಿ ಬಾಂಬ್‍ ದಾಳಿಯ ಹಿನ್ನಲೆ; ಬುರ್ಖಾಕ್ಕೆ ನಿಷೇಧ ಹೇರಿದ ಶ್ರೀಲಂಕಾ

ಶ್ರೀಲಂಕಾ : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‍ ದಾಳಿಯ ಹಿನ್ನಲೆಯಲ್ಲಿ ಇದೀಗ ಭಾರಿ ಕಟ್ಟುನಿಟ್ಟಿನ ...

news

ಆರು ವರ್ಷದ ಬಾಲಕಿಯ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಡೆಹ್ರಾಡೂನ್ : ಆರು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ್ದಲ್ಲದೇ ಆಕೆಯ ಮೃತದೇಹದ ಮೇಲೆ ...

news

ಹಾಸನದ ಜಿಲ್ಲಾಧಿಕಾರಿಯ ವರ್ಗಾವಣೆ ಆಗ್ರಹಿಸಿದ ಸಚಿವ ರೇವಣ್ಣ. ಕಾರಣವೇನು ಗೊತ್ತಾ?

ಹಾಸನ : ಹಾಸನದ ಜಿಲ್ಲಾಧಿಕಾರಿ ಈ ಕೂಡಲೇ ವರ್ಗಾವಣೆ ಮಾಡಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ...