ಬೆಳಗಾವಿ : ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಹೇಳಿಕೆಗೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್, 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ. ಅದನ್ನ ಬಿಟ್ಟು ಮಹಾರಾಷ್ಟ್ರದ ಚುನಾವಣೆಯಲ್ಲಿ ಯಡಿಯೂರಪ್ಪ ಈ ರೀತಿ ಹೇಳುವುದು ಸರಿಯಲ್ಲ. ಯಡಿಯೂರಪ್ಪ ಮೊದಲು ಕರ್ನಾಟಕದ ನೀರಾವರಿ ಬಗ್ಗೆ ಯೋಚನೆ ಮಾಡಲಿ ಎಂದು ಗುಡುಗಿದ್ದಾರೆ. ಯಡಿಯೂರಪ್ಪನವರು