ಶಾಲೆಗಳು ಆರಂಭವಾಗಿ ತಿಂಗಳು ಕಳೆದ್ರೂ ಕೂಡಾ ಶಾಲಾ ಮಕ್ಕಳಿಗೆ ಸಮವಸ್ತ್ರ ಸಿಗುತ್ತಿಲ್ಲ. ಹಾಗಂತ ಸರಕಾರ ಇದಕ್ಕೆ ಅನುದಾನ ಕೊಟ್ಟಿಲ್ಲಾ ಅಂತಾನೂ ಅಲ್ಲ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸರ್ಕಾರಿ ಶಾಲೆಗಳಿಗೆ ಸರ್ಕಾರಾನೇ ಕೊಟ್ಟಿರೋ ಸಮವಸ್ತ್ರಗಳನ್ನ ವಿತರಣೆ ಮಾಡೋಕೆ ಸರ್ಕಾರಿ ಅಧಿಕಾರಿಗಳೇ ಹಿಂದೇಟು ಹಾಕ್ತಿದ್ದಾರೆ. ಇಚ್ಛಾಶಕ್ತಿ ಕೊರತೆಯಿರೋ ಅಧಿಕಾರಿಗಳು ಇರೋದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿ ತಾಲ್ಲೂಕಿನಾದ್ಯಂತ ಸುಮಾರು ತೊಂಭತ್ಮೂರು ಶಾಲೆಗಳಿದ್ದೂ ಹತ್ತೊಂಭತ್ತು ಸಾವಿರ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅಣುಗುಣವಾಗಿ ಸರ್ಕಾರ