ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರಲ್ಲಿ ಕೊರೊನಾ ಕೇಸ್ ಗಳು ಕಾಣಿಸಿಕೊಳ್ಳುವುದು ಮುಂದುವರಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ 89 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಮೂಲ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ವೈರಸ್ ಹರಡಿದೆ. ಆ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಕಲಬುರಗಿಯಲ್ಲಿ 2,192ಕ್ಕೆ ಏರಿಕೆಯಾಗಿದೆ. ಡೆಡ್ಲಿ ಕೊರೊನಾಕ್ಕೆ ಈವರೆಗೆ 36 ಜನರು ಬಲಿಯಾಗಿದ್ದಾರೆ.ಹೊಸದಾಗಿ 29 ಜನರು ಬಿಡುಗಡೆಗೊಂಡಿದ್ದು, ಒಟ್ಟು 1506 ಜನರು ಗುಣಮುಖರಾದಂತಾಗಿದೆ. 650 ಸಕ್ರಿಯ ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.