ಸಂಬಂಧದಲ್ಲಿ ಮಗಳಾಗಬೇಕಾದ ಯುವತಿಯೊಂದಿಗೆ ಮದುವೆಯಾಗಲು ಯುವಕ ಮುಂದಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ಸಾಗರ್ ಸುಗತೇಕರ್ ಎಂಬಾತ ಅದೇ ಕಾಲೋನಿಯ ಪೂನಂ ಸುಗತೇಕರ್ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಇವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರವಾಗಿ ಪ್ರೀತಿ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧವೂ ಬೆಳೆದಿತ್ತು. ಮದುವೆ ಮಾಡಿಕೊಳ್ಳಲು ವಾರದ ಹಿಂದೆ ಈ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಸಂಬಂಧದಲ್ಲಿ