ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರಿಂದಾಗಿ ತಮಗೆ ಬೇಕಾದ ಸ್ಥಾನ ಸಿಗಲಿಲ್ಲವೆಂದು ಈಗ ತಮಗೆ ಅಧಿಕಾರ ಸಿಕ್ಕಾಗ ಜಿ ಪರಮೇಶ್ವರ್ ಸೇಡು ತೀರಿಸಿಕೊಂಡರಾ?ಹಾಗಂತ ಕಾಂಗ್ರೆಸ್ ವಲಯದಲ್ಲಿ ಗುಸು ಗುಸು ಕೇಳಿಬಂದಿದೆ. ಸಿದ್ದರಾಮಯ್ಯ ಪರವಾಗಿ ಮಾತನಾಡಿದವರು, ಅವರ ಆತ್ಮೀಯರನ್ನು ಈ ಸರ್ಕಾರದಲ್ಲಿ ಯಾವುದೇ ಹುದ್ದೆ ಕೊಡದೇ ಪರಮೇಶ್ವರ್ ಅಂದು ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪರಮೇಶ್ವರ್ ಬಗ್ಗೆ ಹಲವು ಹಿರಿಯ ನಾಯಕರು ಅಸಮಾಧಾನ