ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ವಿವಿಧ ಕಾಮಗಾರಿಗಳ ಉದ್ಘಾಟನೆ ಅಂಗವಾಗಿ ಬೆಣ್ಣೆ ನಗರಿ ದಾವಣಗೆರೆಗೆ ಮಧ್ಯಾಹ್ನ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಐದು ಕಡೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಷಾ ಭಾಗಿಯಾಗಲಿದ್ದಾರೆ. ದೆಹಲಿಯಿಂದ ಹುಬ್ಬಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ನಂತರ ದಾವಣಗೆರೆಗೆ ಮಧ್ಯಾಹ್ನ 2.50ಕ್ಕೆ ಜಿಎಂಐಟಿ ಕಾಲೇಜ್ ಹೆಲಿಪ್ಯಾಡ್ ಗೆ ಆಗಮಿಸಿದರು. ಮಧ್ಯಾಹ್ನ 3.05ಕ್ಕೆ ಗಾಂಧಿ ಭವನ ಉದ್ಘಾಟನೆ ಮಾಡಿ ಅಲ್ಲಿಂದ 3.25ಕ್ಕೆ ಸ್ಕೌಟ್ ಅಂಡ್ ಗೈಡ್ಸ್ ಆವರಣದಲ್ಲಿರುವ ಕೊಂಡಜ್ಜಿ