ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೀಪ ಬೆಳಗಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್, ಬಿಎಸ್ಆರ್ ಪಕ್ಷದ ಶಾಸಕ ಕುಡುಚಿ ರಾಜೀವ್, ಗಿರಯ್ಯ ಪಾಟೀಲ್ ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಅಮಿತ್ ಷಾ ರಾಜ್ಯ ನಾಯಕರ ವಿರುದ್ಧ ಗುಡುಗಿದರು. ಹೀಗಾಗಿ ಕೆಲಕಾಲ ರಾಜ್ಯನಾಯಕರು ದಿಕ್ಕಪಾಲದರು. ವೇದಿಕೆಯಿಂದ ಕೆಳಗಿಳಿದ ಶಾಸಕರು, ಕುರ್ಚಿ ಭರ್ತಿ ಮಾಡಲು