ಶೌಚಾಯಲಯಕ್ಕೆ ಹೋಗಿ ಬರ್ತಿನಿ ಇಟ್ಕೊಳಿ ಅಂತ ಹೇಳಿ ಅಪರಿಚಿತ ಮಹಿಳೆ 9 ತಿಂಗಳ ಹಸುಗೂಸನ್ನು ಯುವಕನೊಬ್ಬನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಮೈಸೂರು ಮೂಲದ ಯುವಕ ಕೆಲಸದ ಮೇಲೆ ರಾಯಚೂರಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ಯುವಕ ಕರೆತಂದ ಮಗುವನ್ನು ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಈ ಮಧ್ಯೆ ಮೈಸೂರಿಗೆ ಹಿಂದಿರುಗಲು ರಘು