ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ಣ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನಿಲ್ಲಿಸಿರುವ ಈರೋಕಿಡ್ಸ್ ಸ್ಕೂಲ್ ಶಾಲೆಯ ಕ್ರಮ ಖಂಡಿಸಿ ಮಕ್ಕಳ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.ಬೆಂಗಳೂರು ಉತ್ತರ ತಾಲ್ಲೂಕಿನದಾಸರಹಳ್ಳಿ ವಿಧಾನಾಸಭಾ ಕ್ಷೇತ್ರದ ಚಿಕ್ಕಬಾಣವಾರದ ಪುರಸಭೆಯಲ್ಲಿರುವ ಈರೋಕಿಡ್ಸ್ ಶಾಲೆಯ ವಿರುದ್ದ ಪೋಷಕರು ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.ಈಗಾಗಲೆ ಕೊರೊನಾದಿಂದ ಬಹುತೇಕ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ, ಸರಿಯಾಗಿ ಕೆಲಸಗಳಿಲ್ಲದೇ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಒಂದು