ಕೊರೊನಾ ಸೋಂಕಿತರು ತಮ್ಮ ಟ್ರಾವೆಲ್ ಹಿಸ್ಟರಿ ಸರಿಯಾಗಿ ಹೇಳದಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಮಟಾದಲ್ಲಿ ಪತ್ತೆಯಾಗುವ ಸೋಂಕಿತರು ತಮ್ಮ ಟ್ರಾವೆಲ್ ಹಿಸ್ಟರಿಯನ್ನು ಬಚ್ಚಿಟ್ಟು ಇನ್ನಷ್ಟು ಜನರಿಗೆ ಸೋಂಕು ಹರಡುವಂತೆ ಮಾಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.ಹೀಗಂತ ಕುಮಟಾ ಉಪವಿಭಾಗಾಧಿಕಾರಿ ಅಜಿತ್ ಎಂ. ಎಚ್ಚರಿಸಿದ್ದಾರೆ.ಕುಮಟಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಸೋಂಕಿತರ ಟ್ರಾವೆಲ್ ಹಿಸ್ಟರಿ ಸಮರ್ಪಕವಾಗಿ ದೊರೆಯದೇ ಇರುವುದು ಮೂಲ