ಅನ್ ಲಾಕ್ 2.0 ಗೆ ಸಿದ್ಧತೆ: ಇಂದು ಮಹತ್ವದ ಮೀಟಿಂಗ್

ಬೆಂಗಳೂರು| Krishnaveni K| Last Modified ಶನಿವಾರ, 19 ಜೂನ್ 2021 (11:03 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಸೋಮವಾರದಿಂದ ಅನ್ ಲಾಕ್ 2.0 ಗೆ ಸರ್ಕಾರ ಸಿದ್ಧತೆ ನಡೆಸಿದೆ.
 > ಸೋಮವಾರದಿಂದ ಮತ್ತಷ್ಟು ವಿನಾಯ್ತಿ ಸಿಗಲಿದ್ದು, ಹೊಸ ನಿಯಮಾವಳಿಗಳನ್ನು ರೂಪಿಸಲು ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಇಂದೇ ಹೊಸ ಗೈಡ್ ಲೈನ್ಸ್ ಬಹಿರಂಗವಾಗಲಿದೆ.>   ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿರುವ 11 ಜಿಲ್ಲೆಗಳಲ್ಲೂ ಅನ್ ಲಾಕ್ ಆಗುವ ಸಾಧ್ಯತೆಯಿದೆ. ಒಟ್ಟಾರೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಶೇ. 5 ಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಬಸ್ ಸಂಚಾರ, ಅಂಗಡಿಮುಂಗಟ್ಟುಗಳನ್ನು ತೆರೆಯಲು ಸಂಪೂರ್ಣವಾಗಿ ಅವಕಾಶ ನೀಡುವ ಸಾಧ್ಯತೆಯಿದೆ. ಆದರೆ ನೈಟ್ ಕರ್ಫ್ಯೂ ಮುಂದುವರಿಯಬಹುದು.ಇದರಲ್ಲಿ ಇನ್ನಷ್ಟು ಓದಿ :