ಮುಂದಿನ ವಾರದಿಂದ 11 ಜಿಲ್ಲೆಗಳೂ ಅನ್ ಲಾಕ್ ಸಾಧ್ಯತೆ

ಬೆಂಗಳೂರು| Krishnaveni K| Last Modified ಗುರುವಾರ, 17 ಜೂನ್ 2021 (09:55 IST)
ಬೆಂಗಳೂರು: ಪಾಸಿಟಿವಿಟಿ ಅಧಿಕವಿದ್ದ 11 ಜಿಲ್ಲೆಗಳಲ್ಲಿ ಈಗ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಮುಂದಿನ ವಾರ ಈ ಜಿಲ್ಲೆಗಳೂ ಅನ್ ಲಾಕ್ ಆಗುವ ಸಾಧ‍್ಯತೆಯಿದೆ.  
> ಈ ಪೈಕಿ ಬೆಳಗಾವಿಯಲ್ಲಿ ಪಾಸಿಟಿವಿಟಿ ದರ ಶೇ.6, ಶಿವಮೊಗ್ಗದಲ್ಲಿ ಶೇ.5.5, ಮಂಡ್ಯದಲ್ಲಿ ಶೇ.7, ಹಾಸನದಲ್ಲಿ ಶೇ.9 ಇದ್ದರೆ, ಮೈಸೂರಿನಲ್ಲಿ ಈಗಲೂ 13.5 ಶೇ. ಪಾಸಿಟಿವಿಟಿ ದರವಿದೆ. ಇನ್ನು ಎರಡು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಕೊರೋನಾ ಸಂಪೂರ್ಐ ಹತೋಟಿಗೆ ಬರುವ ನಿರೀಕ್ಷೆಯಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಾಗಬಹುದು.>   ಈಗಾಗಲೇ ಅನ್ ಲಾಕ್ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಮತ್ತಷ್ಟು ವಿನಾಯ್ತಿ ಸಿಗುವ ಸಾಧ‍್ಯತೆಯಿದೆ. ಬೆಂಗಳೂರು ಸೇರಿದಂತೆ ಅನ್ ಲಾಕ್ ಜಾರಿಯಲ್ಲಿರುವ ಕಡೆಗಳಲ್ಲಿ ಸಾರಿಗೆ ಸಂಚಾರ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ.ಇದರಲ್ಲಿ ಇನ್ನಷ್ಟು ಓದಿ :