ಜೂನ್ 14 ರ ಬಳಿಕವೂ ಪಾಸಿಟಿವಿಟಿ ಕಡಿಮೆಯಾದರೆ ಮಾತ್ರ ಅನ್ ಲಾಕ್

ಬೆಂಗಳೂರು| Krishnaveni K| Last Modified ಸೋಮವಾರ, 7 ಜೂನ್ 2021 (08:38 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ಹೇರಿರುವ ಲಾಕ್ ಡೌನ್ ಜೂನ್ 14 ಕ್ಕಾದರೂ ಮುಕ್ತಾಯವಾಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದರೆ ಇದಕ್ಕೆ ರಾಜ್ಯ ಸರ್ಕಾರ ಷರತ್ತೊಂದನ್ನು ವಿಧಿಸಿದೆ.

 
ಜೂನ್ 14 ರ ಬಳಿಕವೂ ಲಾಕ್ ಡೌನ್ ತೆರವು ಮಾಡಬೇಕಾದರೆ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾಗಬೇಕು. ಇಲ್ಲದೇ ಹೋದರೆ ಅನ್ ಲಾಕ್ ಅಸಾಧ‍್ಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
 
ರಾಜ್ಯದಲ್ಲಿ ಎಲ್ಲಾ ಕಡೆ ಲಾಕ್ ಡೌನ್ ಮುಕ್ತಗೊಳಿಸಬೇಕೆಂದರೆ ಪಾಸಿಟಿವಿಟಿ ದರ ಶೇ.5 ಕ್ಕೆ ಇಳಿಕೆಯಾಗಬೇಕು. ಹೀಗಾದಲ್ಲಿ ಲಾಕ್ ಡೌನ್ ವಿನಾಯ್ತಿ ಬಗ್ಗೆ ಚಿಂತಿಸಲಾಗುವುದು. ಸೋಂಕು ಕಡಿಮೆಯಾದರೆ ರಿಯಾಯಿತಿ ಬಗ್ಗೆ ನಿರ್ಧರಿಸುವುದಾಗಿ ಸಚಿವರು ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :