ಭಾರೀ ವಿವಾದಕ್ಕೆ ಕಾರಣವಾಯಿತು, 2022ರ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿವಾದಿತ ಪಠ್ಯಗಳನ್ನು ಸರ್ಕಾರ ಹೊಸದಾಗಿ ಪರಿಷ್ಕರಣೆ ಮಾಡಿದೆ. ಸರ್ಕಾರ ಆದೇಶದಂತೆ ಎಂಟು ಪಠ್ಯಗಳನ್ನು ಹೊಸದಾಗಿ ಪರಿಷ್ಕರಣೆ ಮಾಡಿ ಇಲಾಖೆ ವೆಬ್ ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ 59 ಪುಟಗಳ ಪರಿಷ್ಕೃತ ಪಠ್ಯವನ್ನು ಬಿಡುಗಡೆ ಮಾಡಲಾಗಿದೆ. 6,7,9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಗಳು, 7 ನೇ ತರಗತಿಯ ಕನ್ನಡ ಭಾಷೆಯ ಪದ್ಯ ಮತ್ತು