ಚೆನ್ನೈ :ಡಿಎಂಕೆ ಸರ್ಕಾರದ ಸಾಧನೆಗಳನ್ನು ಬಣ್ಣಿಸುವ ವಂದನಾ ನಿರ್ಣಯದ ಭಾಷಣ ಮಾಡಲು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ನಿರಾಕರಿಸಿದ್ದಾರೆ. ತಮಿಳಿನಲ್ಲಿದ್ದ ಭಾಷಣದ ಅನುವಾದವನ್ನು ರಾಜ್ಯಸರ್ಕಾರ ಇಂಗ್ಲಿಷ್ ಗೆ ಅನುವಾದಿಸಿ ಸಿದ್ದಪಡಿಸಿತ್ತು. ರಾಜ್ಯಸರ್ಕಾರದ ಸಾಧನೆಗಳು ಹಾಗೂ ಮುನ್ನೋಟಗಳ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ಶಿಷ್ಟಾಚಾರದಂತೆ ಈ ಭಾಷಣವನ್ನು ರಾಜ್ಯಪಾಲರೇ ಓದಬೇಕಿತ್ತು. ಆದರೆ ರಾಜ್ಯಪಾಲರು ನಿರಾಕರಿಸಿದ ಕಾರಣ ಸ್ಪೀಕರ್ ಎಂ ಅಪ್ಪಾವು ಭಾಷಣವನ್ನು ಓದಿದ್ದಾರೆ. ಭಾಷಣ ಮುಗಿದ ಬಳಿಕ ರಾಷ್ಟ್ರಗೀತೆಗೂ ಸಹ ಕಾಯದೇ ರಾಜ್ಯಪಾಲರು ಅಧಿವೇಶನದಿಂದ ಹೊರಗೆ ನಿರ್ಗಮಿಸಿದ್ದಾರೆ.