ತವರಿಗೆ ಹೋಗುವ ವಿಚಾರವಾಗಿ ನಡೆದ ಗಲಾಟೆಯಿಂದ ಬೇಸತ್ತಿದ್ದರು ಎನ್ನಲಾದ ಪವಿತ್ರಾ (28) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಹುಳಿಯೂರಿನ ಪವಿತ್ರಾ, ಹಿರಿಯೂರಿನ ಚೇತನ್ ಅವರನ್ನು ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು. ಚೇತನ್, ಬೆಂಗಳೂರಿನ ಕಂಪನಿಯೊಂದರ ಉದ್ಯೋಗಿ. ನೆಲಮಂಗಲದಲ್ಲಿ ನೆಲೆಸಿದ್ದ ದಂಪತಿಗೆ 11 ತಿಂಗಳ ಮಗುವಿದೆ ಎಂದು ಪೊಲೀಸರು ಹೇಳಿದರು. ಕ್ರಿಸ್ಮಸ್ ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿದ್ದವು. ಪವಿತ್ರಾ ಅವರು