ವಿಶೇಷ ನೊಂದಣಿ ಅಭಿಯಾನ ಸದುಪಯೋಗ ಪಡಿಸಿಕೊಳ್ಳಿ

bangalore| geetha| Last Modified ಗುರುವಾರ, 25 ನವೆಂಬರ್ 2021 (20:53 IST)
ಜಿಲ್ಲಾ ಚುನಾವಣಾಧಿಕಾರಿ - ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ ಚುನಾವಣಾ ಆಯೋಗದ ಆದೇಶ ಸಂಖ್ಯೆ: 23/2021/ERS-(Vol-II), ದಿನಾಂಕ: 27.08.20210 ನಿರ್ದೇಶನದಂತೆ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ -2022 ಕಾರ್ಯವು ಪ್ರಗತಿಯಲ್ಲಿದ್ದು, ಯಾವುದೇ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಧೈಯೋದ್ದೇಶದಿಂದ ಸಾರ್ವಜನಿಕರು/ಮತದಾರರಿಗೆ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಲು ವಿಶೇಷ ನೊಂದಣಿ ಅಭಿಯಾನವನ್ನು ನವೆಂಬರ್ ಮಾಹೆಯ 4 ಭಾನುವಾರಗಳಂದು ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ದಿನಾಂಕ: 7, 14, 21, 28 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಈಗಾಗಲೇ ಅಭಿಯಾನವು 3 ಭಾನುವಾರಗಳಂದು ಯಶಸ್ವಿಯಾಗಿ ಮುಕ್ತಾಯಗೊಂಡಿರುತ್ತದೆ.

ಎಲ್ಲಾ ಕಂದಾಯ ಅಧಿಕಾರಿ/ಸಹ ಕಂದಾಯ ಅಧಿಕಾರಿ ವಾರ್ಡ್ ಕಛೇರಿಗಳು ಮತ್ತು ಮತಗಟ್ಟೆಗಳಲ್ಲಿ ಕಡೆಯ ಅಭಿಯಾನವಾಗಿ ದಿನಾಂಕ: 28-11-2021ರ ಸಹ ಆಯೋಜಿಸಲಾಗಿರುತ್ತದೆ. ಈ ಸಂಬಂಧ ಮತದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಭಾನುವಾರವು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಕುರಿತು https://electoralsearch.in ಭೇಟಿ ನೀಡಿ ಪರಿಶೀಲಿಸಿಕೊಂಡು ದೃಢೀಕರಿಸಿಕೊಳ್ಳಬಹುದು.

ಒಂದು ವೇಳೆ ಹೆಸರು ನೊಂದವಣಿಯಾಗದಿದ್ದಲ್ಲಿ ಈ ಲಿಂಕ್ https://www.nvsp.in ಭೇಟಿ ನೀಡಿ ಅಥವಾ Mobile App ನಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :