ಕಲಬುರಗಿ : ಸಿದ್ದರಾಮಯ್ಯ ತೆರೆಮರೆಯಲ್ಲಿ ಸರ್ಕಾರಕ್ಕೆ ಧಕ್ಕೆ ತರುತ್ತಿಲ್ಲ ಎಂದು ಸಿದ್ದರಾಮಯ್ಯ ಪರ ಸಚಿವ ಯು.ಟಿ.ಖಾದರ್ ಬ್ಯಾಟ್ ಬೀಸಿದ್ದಾರೆ.ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನಲೆಯಲ್ಲಿ ಈ ಕುರಿತು ಮಾತನಾಡಿದ ಸಚಿವ ಯು.ಟಿ.ಖಾದರ್, ಎಲ್ಲರನ್ನೂ ಸಿದ್ದರಾಮಯ್ಯ ಒಟ್ಟಿಗೆ ಕರ್ಕೊಂಡು ಹೋಗ್ತಿದ್ದಾರೆ. ಅವ್ರು ಸರ್ಕಾರ ಕೆಡವಲು ಮುಂದಾಗಿದ್ದಾರೆ ಅನ್ನೋದು ತಪ್ಪು. ಸಿದ್ದರಾಮಯ್ಯ ತೆರೆಮರೆಯಲ್ಲಿ ಸರ್ಕಾರಕ್ಕೆ ಧಕ್ಕೆ ತರುತ್ತಿಲ್ಲ ಎನ್ನುವುದರ ಮೂಲಕ ಸಿದ್ದರಾಮಯ್ಯ ನವರ ಪರ