ಮೈಸೂರು|
Jagadeesh|
Last Modified ಶುಕ್ರವಾರ, 20 ಡಿಸೆಂಬರ್ 2019 (18:31 IST)
ಮಂಗಳೂರಲ್ಲಿ ಗೋಲಿಬಾರ್ ನಡೆದು ಇಬ್ಬರು ಜೀವ ಕಳೆದುಕೊಂಡಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆಗೆ ಮಾಜಿ ಸಚಿವ ಯು.ಟಿ.ಖಾದರ್ ಅವರೇ ನೇರವಾಗಿ ಕಾರಣರಾಗಿದ್ದಾರೆ. ಹೀಗಂತ ಸಂಸದ
ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ನೈತಿಕ ಹೊಣೆಯನ್ನು ಯು.ಟಿ.ಖಾದರ್ ಹೊರಬೇಕು. ಕಾಂಗ್ರೆಸ್ ನಿಂದ ಖಾದರ್ ಅವರನ್ನು ಕೂಡಲೇ ಉಚ್ಛಾಟನೆ ಮಾಡಬೇಕು. ಹೀಗಂತ ಪ್ರತಾಪ್ ಸಿಂಹ ಆಗ್ರಹ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದಲ್ಲಿದ್ದವರನ್ನು ಹೊರಕ್ಕೆ ಹಾಕುವುದಿಲ್ಲ. ಬೇರೆ ದೇಶಗಳಿಂದ ತುಳಿತಕ್ಕೆ ಒಳಗಾಗಿ ಭಾರತಕ್ಕೆ ಬರೋ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕಾಗಿದೆ ಎಂದಿದ್ದಾರೆ.