ಬೆಂಗಳೂರು :ಅಧಿವೇಶನದ ವೇಳೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರವನ್ನು ತಣಿಸುವ ವೇಳೆ ಯು.ಟಿ ಖಾದರ್ ತುಳುವಿನಲ್ಲಿ ಡೈಲಾಗ್ ಹೊಡೆದರು.ಮಸೂದೆಗಳ ಮಂಡನೆಗಾಗಿ ಸದನ ಅನುವಾದಾಗ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಕೊಬ್ಬರಿ ಬೆಂಬಲ ಬೆಲೆಯ ಬಗ್ಗೆ ಪ್ರಾಸ್ತಾವಿಕ ಚರ್ಚೆಗೆ ಅನುಮತಿ ನೀಡುವಂತೆ ಪಟ್ಟು ಹಿಡಿದರು. ಇದಕ್ಕೆ ವಿರೋಧ ಪಕ್ಷದವರೂ ಸಹ ದನಿಗೂಡಿಸಿದರು.ಪ್ರಾಸ್ತಾವಿಕ ಭಾಷಣ ಮಾಡಲು ಅನುಮತಿ ನೀಡಿದಾಗ, ಕಾಂಗ್ರೆಸ್ ಶಾಸಕ ಶಿವಲಿಂಗೇ ಗೌಡರು, ರೇವಣ್ಣನವರಿಗೆ ಅವಕಾಶ ಕೊಟ್ಟರೆ ನಮಗೂ ಅವಕಾಶ