ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಜನರಿಗೆ ಉಚಿತ ಲಸಿಕೆ ನೀಡುತ್ತೇವೆ ಅಂತಾರೆ. ಆದರೆ ಉಚಿತ ಲಸಿಕೆಯ ಪೋಸ್ಟ್ ಮಾತ್ರ ಜನರ ಕಣ್ಣಿಗೆ ಕಾಣುತ್ತಿವೆ ಹೊರತು ಈವರೆಗೆ ಉಚಿತ ಲಸಿಕೆ ಮಾತ್ರ ಜನರಿಗೆ ಸಿಗುತ್ತಿಲ್ಲ ಎಂದು ಕಿಡಿಕಾರಿದರು. ಸರಕಾರದಿಂದ ಬರೀ ಆದೇಶಗಳು ಮಾತ್ರ ಜಾರಿಯಾಗುತ್ತಿವೆ. ಒಂದೂವರೆ ಲಕ್ಷದ ಲಸಿಕೆಯ ಅವಶ್ಯಕತೆ ನಮ್ಮ ಜಿಲ್ಲೆಗೆ ಇದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕೂಡಲೇ ಕ್ರಮ ವಹಿಸಬೇಕು. ಸರಕಾರ ತಮ್ಮ ರಾಜಕೀಯ ಆಟದಲ್ಲಿ