ಏಯ್ ಅಧ್ಯಕ್ಷಾ, ಏಯ್ ಚಮಚಾ ನಿಂತ್ಕೊಳ್ಳೋ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ಧ ಮಾಜಿ ಶಾಸಕ ವೈಜಿನಾಥ್ ಪಾಟೀಲ್ ಹರಿಹಾಯ್ದ ಘಟನೆ ವರದಿಯಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದ ವೈಜಿನಾಥ್ ಪಾಟೀಲ್, ಧರ್ಮಸಿಂಗ್ ಮತ್ತು ಮಲ್ಲಿಕಾರ್ಜನ್ ಖರ್ಗೆ ಮಕ್ಕಳಿಗೆ ಪಕ್ಷದ ಟಿಕೆಟ್ ಕೊಡ್ತಾರೆ. ನನ್ನ ಪುತ್ರಿ ವಿಕ್ರಂ ಪಾಟೀಲ್ಗೆ ಯಾಕೆ ಟಿಕೆಟ್ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ.