ಅಜಾತ ಶತೃ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನ ತಮ್ಮ ನೂತನ ಮನೆಗೆ ಇಡುವ ಮೂಲಕ ಕಾರ್ ಚಾಲಕನೋರ್ವ ಆದರ್ಶ ಮೆರೆದ ಘಟನೆ ನಡೆದಿದೆ.ಗದಗದ ಪಂಚಾಕ್ಷರಿ ನಗರದ ನಿವಾಸಿ ವೀರಭದ್ರಪ್ಪ ಡಂಬಳ ಎಂಬುವರು ತಮ್ಮ ಕನಸಿನ ಮನೆಗೆ ವಾಜಪೇಯಿ ನಿವಾಸ ಎಂದು ಹೆಸರಿಟ್ಟಿದ್ದಾರೆ. ಸ್ಥಳೀಯ ಸಾರ್ವಜನಿಕರ ಸಮ್ಮುಖದಲ್ಲಿ ನಾಮಫಲಕ ಉದ್ಘಾಟಿಸಿದರು. ನಂತರ ಪುಷ್ಪಗಳಿಂದ ಅಲಂಕಾರಗೊಂಡ ಅಟಲ್ ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ನೂತನ ನಿವಾಸದ ಉದ್ಘಾಟನೆಯಲ್ಲಿ ಪಾಲ್ಗೊಂಡವರಿಗೆ ಸಿಹಿ ಹಂಚಿದರು.