ವೆಲೈಂಟೈನ್ಸ್ ಡೇ; ಪ್ರೇಮಿಗಳಿಗೆ ಶ್ರೀರಾಮ ಸೇನೆ ಖಡಕ್ ಎಚ್ಚರಿಕೆ

ಉಡುಪಿ, ಬುಧವಾರ, 13 ಫೆಬ್ರವರಿ 2019 (15:38 IST)

ವೆಲೈಂಟೈನ್ಸ್ ಡೇ ಗೆ ಪ್ರೇಮಿಗಳಿಗೆ ಖಡಕ್ ಎಚ್ಚರಿಕೆಯನ್ನು  ಶ್ರೀ ರಾಮ್ ಸೇನೆ ಕೊಟ್ಟಿದೆ.

ವೆಲೈಂಟೈನ್ಸ್ ಡೇ ಅಂಗವಾಗಿ ಅಶ್ಲೀಲವಾಗಿ ಜೋಡಿಗಳು ಕಂಡು ಬಂದಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖಂಡರು ತಿಳಿಸಿದ್ದಾರೆ.

ಪ್ರೇಮಿಗಳ‌ ದಿನದ ಬದಲು ತಂದೆ ತಾಯಿಗಳನ್ನ ಪೂಜಿಸಿ ಎಂದಿರುವ ಮುಖಂಡರು, ಫೆ. 14ರ ಪ್ರೇಮಿಗಳ ದಿನಾಚರಣೆಗೆ ಉಡುಪಿ ಜಿಲ್ಲಾ ಶ್ರೀ ರಾಮಸೇನೆ ವ್ಯಕ್ತಪಡಿಸಿದೆ. 

ಪ್ರಮೋದ್ ಮುತಾಲಿಕ್ ರ ಸಲಹೆಯಂತೆ  ಪ್ರೇಮಿಗಳ ದಿನಾಚರಣೆ ಬದಲು ತಂದೆ-ತಾಯಿಯವರನ್ನು ಪೂಜಿಸಿ ಎಂದು ಯುವಕ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಸೇನೆ ಮುಂದಾಗಿದೆ .

ಈ ದಿನದಂದು ರಸ್ತೆ, ಪಾರ್ಕ್, ಅಥವಾ ಇನ್ಯಾವುದೇ ಸ್ಥಳದಲ್ಲಿ ಅಸಭ್ಯ, ಅಶ್ಲೀಲ,  ಅಸಹ್ಯವಾಗಿ ವರ್ತಿಸುವ ಜೋಡಿಗಳನ್ನ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಅವರವರ ಹೆತ್ತವರಿಗೆ ಮಾಹಿತಿ ನೀಡುತ್ತೇವೆ ಎಂದು ಉಡುಪಿ ಜಿಲ್ಲಾ ಶ್ರೀ ರಾಮಸೇನೆ ಅಧ್ಯಕ್ಷ ಜಯರಾಮ್ ಅಂಬೆಕಲ್ಲು  ಎಚ್ಚರಿಕೆ ನೀಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೌಡರ ವಿರುದ್ಧ ಅವಹೇಳನ; ಬಿಜೆಪಿ ಶಾಸಕನ ವಿರುದ್ಧ ಜೆಡಿಎಸ್ ಆಕ್ರೋಶ

ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರ ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹಗುರವಾಗಿ ಮಾತನಾಡಿರುವ ...

news

ನನ್ನ ಕೊಂಡೊಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದ ಶಾಸಕ!

ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿದ್ದ ಜೆಡಿಎಸ್ ಶಾಸಕ ಬೆಂಗಳೂರಿಗೆ ಆಗಮಿಸಿದ್ದಾರೆ. ...

news

ಖರೀದಿಸಿದ್ದು ಮೊಬೈಲ್: ಕೈಗೆ ಸಿಕ್ಕಿದ್ದು ಏನು ಗೊತ್ತಾ?

ಗ್ರಾಹಕರು ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡಿ ಈಗ ಪೇಚಿಗೆ ಸಿಲುಕಿಕೊಂಡಿದ್ದಾರೆ.

news

ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!

ಆಗಷ್ಟೇ ಹುಟ್ಟಿದ ಹೆತ್ತ ಹಸುಳೆಯ‌ನ್ನು ತಾಯಿಯೊಬ್ಬಳು ರಸ್ತೆ ಬದಿ ಮಲಗಿಸಿ ಹೋದ ಘಟನೆ ನಡೆದಿದೆ.