ದುರಸ್ತಿ ಕಾಮಗಾರಿ ಹಿನ್ನೆಲೆ ನೇರಳೆ ಮಾರ್ಗದ ನಮ್ಮ ಮೆಟ್ರೋ ಸೇವೆ ನಾಳೆ ಸಂಜೆ 4 ಗಂಟೆಯಿಂದ ಭಾನುವಾರ ಬೆಳಗ್ಗೆ 6ರ ವರೆಗೆ ಸ್ಥಗಿತಗೊಳ್ಳಲಿದೆ. ಟ್ರಿನಿಟಿ ಸರ್ಕಲ್ ನಿಂದ ಹಲಸೂರು ವರೆಗಿನ ಸೇವೆ ಸ್ಥಗಿತಗೊಳ್ಳಲಿದ್ದು,ಕೆಂಗೇರಿಯಿಂದ ಎಂಜಿ ರಸ್ತೆವರೆಗೆ ಮಾತ್ರ ಈ ಅವಧಿಯಲ್ಲಿ ಮೆಟ್ರೋ ಸೇವೆ ಇರಲಿದೆ. ನಿಲ್ದಾಣದ ದುರಸ್ತಿ ಕಾರ್ಯ ಹಿನ್ನೆಲೆ ಸೇವೆ ಸ್ಥಗಿತಗೊಳಲಿದ್ದು, ಭಾನುವಾರದಿಂದ ಎಂದಿನಂತೆ ಸಂಚಾರ ಇರಲಿದೆ.ಹಸಿರು ಮಾರ್ಗದ ಮೆಟ್ರೋ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.